
ನವಿರಾದ ಎಳೆಮೇಲೆ
ಸಂಭ್ರಮದ ತೋರಣವ ಹೇರಿ
ಹಬ್ಬದಾಚರಣೆಯ
ಕನಸು ಕಟ್ಟಿದ್ದೆ
ಅಕ್ಕರೆಯ ಸಕ್ಕರೆಯ
ಮಾತಿಗೆ ಬೆರಗಾಗಿ
ಮನಬಿಚ್ಚಿ ನಲಿದಾಡಿ
ಸಂತಸದಿ ನಾನಿದ್ದೆ
ಮರಳ ಹಾದಿಯಲಿರುವ
ಮರೀಚಿಕೆಯದೆಂದು
ಅರಿವಾಯಿತೆನಗೆ
ಬಹಳ ತಡವಾಗಿ
ಸವಿ ಮಾತ ಅರಸುತ್ತ
ನಂಬಿ ಮುನ್ನಡೆಯುತ್ತ
ಅರಿವಿಲ್ಲದೆ ಜೇನುಗೂಡಿನಲಿ
ಕೈ ಇಟ್ಟಿದ್ದೆ ನಿನಗಾಗಿ
ಮೆಚ್ಚಬೇಕು ನಿನ್ನ ಕಲೆಯ
ನಾಜೂಕಾಗಿ
ಜೇಡದಂತೆ ಹೆಣೆವೆ
ಸಂಬಂಧದ ಬಲೆಯ
ಬಲೆಗೆ ಬಿದ್ದು ನರಳುವರ ಕಂಡು
ಎಳೆ ಹರಿದು ಮರುಗುವರ ಕಂಡು
ನಸು ನಕ್ಕು
ಅಂಟಿಯೂ ಅಂಟದೆ ಮತ್ತೆ ಬಲೆ ಹೆಣೆವ
ನಿನ್ನ ಕ್ರೌರ್ಯಕೆ ಏನ ಹೇಳಲಿ....
3 comments:
Very nice! ಸಂಬಂಧಗಳಲ್ಲಿ ಒಮ್ಮೊಮ್ಮೆ ಆಗುವ ಮೋಸವನ್ನು ಉತ್ತಮವಾದ ರೂಪಕದೊಂದಗೆ (ಜೇಡರ ಬಲೆ) ಹೋಲಿಕೆ ಮಾಡಿದ್ದೀರ..
nice one!
Post a Comment