Monday, July 18, 2011

ಕಳೆದುಹೋಗಿದೆ ಕವಿತೆ...

ಯಾಕೋ ಬರೆಯೋಕೆ ಬೇಜಾರು ಅನ್ನಿಸೋಕೆ ಶುರುವಾಗಿ ಸ್ವಲ್ಪ ದಿನಗಳಾಗಿತ್ತು..ಬರೆದ ಕೆಲ ಸಾಲುಗಳೂ ಅಪೂರ್ಣವೆನ್ನಿಸುತ್ತಿತ್ತು....blog ಗೆ ಏನನ್ನೂ ಬರೆಯದೆ ತುಂಬಾ ದಿನಗಳಾಯ್ತು ಏನಾದರೂ ಹಾಕೋಣ ಎಂದು ಹಳೆಯ ಒಂದು ಕವಿತೆಯನ್ನ ಬರೆದಿಟ್ಟದ್ದು ನೆನಪಿಸಿಕೊಂಡೆ. ಆದರೆ ಅದನ್ನ ಬರೆದಿಟ್ಟ ಪುಟ ಸಿಗಲೇ ಇಲ್ಲ...ಆಗ ಹೊಳೆದ ಸಾಲುಗಳಿವು....


ಕಳೆದುಹೋಗಿದೆ ಕವಿತೆ
ಎಲ್ಲೋ ಉದುರಿಹೋಗಿವೆ ನಾ ಬರೆದಿಟ್ಟ ಅಕ್ಷರಗಳು
ಸಿಕ್ಕಿದರೆ ಸಾಕೆನಗೆ ಕೆಲವೇ ಕೆಲವು ಚರಣಗಳು
ಯಾಕೆ ಕಳೆದುಹೋಗಿದ್ದೆ ಎಂದು ನಾ ಗದರಬೇಕದಕ್ಕೆ

ಮನದೊಳಗಿನ ಪ್ರತಿ ಭಾವದ ಬಣ್ಣಗಳನು
ಬಸಿದು,ಬೆಸೆದು, ಹೊಸೆದ  ಸಾಲುಗಳು
ಕಣ್ಣಂಚಿನ ಹನಿಯು ಜಾರುವ ಮುನ್ನ
ಪದವಾದ ನೋವು-ನಲಿವುಗಳು

ಅವಳ ಅವನ ಅದರ...
ಎಂದು ಹಳೆಯ ನೆನಪಿನಲಿ ಎಂದೋ ಗೀಚಿಟ್ಟ ಕವಿತೆ 
ಪುಟದೊಂದಿಗೆ ಶಾಮೀಲಾಗಿ ಹಾರಿಹೊಯಿತೇ ನನ್ನ ಬಿಟ್ಟು

ಅಪೂರ್ಣವೆಂದಿದ್ದಕ್ಕೆ ಬೇಸರವೋ 
ತೃಪ್ತಿ ನೀಡದ ಸಾಲು ಎಂದು ಮುನಿಸೋ
ಕಾರಣ ಹೇಳಲು ಸಾಲುಗಳೇ ಇಲ್ಲ!!!

ಭಾವ ಬೆಸೆವ ಸಾಲುಗಳು 
ದ್ವೇಷ ಮರೆಸುವ ಸಾಲುಗಳು 
ಸವಿ ನೆನಪಿನ ಸಾಲುಗಳು....
ಕಳೆದುಹೋಗಿವೆ....ಸಿಕ್ಕಿದರೆ ಕೊಟ್ಟುಬಿಡಿ
ಮನಸಿಗೆ ಮುದನೀಡುವ ನನ್ನ ನೆಚ್ಚಿನ ಸಾಲುಗಳನು..


ಹಾರುತಿದ್ದ ಪುಟಗಳ ಚಿತ್ರವ ಹಿಡಿದಿದ್ದು:ಅಂತರ್ಜಾಲದಲ್ಲಿ :)


12 comments:

Shruthi B S said...

kavite tumba changiddu.....ishta atu.....:)

prashasti said...

chennagiduu kavite. inta kavitegalu battu andre pade pade ninna kavanagalu kaledu hogli heli haraisti :-) :-)

Pradeep Rao said...

Hey! nice poem sou! ನಿಮ್ಮ ಕಳೆದು ಹೋದ ಸಾಲುಗಳು ಸಿಕ್ಕರೆ ಖಂಡಿತ ಬುದ್ಧಿ ಹೇಳಿ ನಿಮ್ಮ ಬಳಿಗೇ ಕಳಿಸಿ ಕೊಡುತ್ತೇನೆ... :)

Praveen said...

Super kane.. Sikmele innond kavite bari :)

ವಾಣಿಶ್ರೀ ಭಟ್ said...

good one!

ಸೌರಭಾ said...

ಎಲ್ಲರಿಗೂ ಧನ್ಯವಾದಗಳು..:)

LG said...

Simply super sister.........

Imran said...

nanage kelavu saalugalanna nodidaaga "ee saalugalu nangeke holilillaa"? antaa anisok shuru aaytu..!!
courtesy: Miss Sourabha Bhat..!!

Sandeepa G said...

kalpanegala agasadi yochanegala karmoda.. karagi male suriye sundara...
don't be the prisoner of past...
kaledudara bagge chintisabeda.. munnadeye kavitegala vani... :)

shalu said...

very nice lines...i liked 2nd stanza very much...keep weitin...:)

ಜಲನಯನ said...

ಸೌರಭಾ ಸಾಲುಗಳು ಎಲ್ಲೋ ಚದುರಿದ್ದು ಎನಿಸುವಂತೆ ಮಾಡುತ್ತವೆ...ಅದರಲ್ಲೂ
ಅಪೂರ್ಣವೆಂದಿದ್ದಕ್ಕೆ ಬೇಸರವೋ
ತೃಪ್ತಿ ನೀಡದ ಸಾಲು ಎಂದು ಮುನಿಸೋ
ಕಾರಣ ಹೇಳಲು ಸಾಲುಗಳೇ ಇಲ್ಲ!!!
ಮೆಚ್ಚಿಗೆಯಾದ ಮೂರ್ಸಾಲು...

ಸೌರಭಾ said...

ಎಲ್ಲರಿಗೂ ಧನ್ಯವಾದಗಳು :)