Monday, March 5, 2012

ಗೋರಿಗಳೊಂದಿಗಿನ ಬದುಕು


ಹುಟ್ಟಿದವ ಒಮ್ಮೆಯಾದರೂ ಇಲ್ಲಿ ಬರಲೇಬೇಕು
ಬದುಕು ಮುಗಿದಾಗಲೋ..ಬದುಕು ಮುಗಿಸಿದವರ ಕಳುಹಲೋ...
ನನ್ನದೇನೋ ಕರ್ಮ ನಾ ಬದುಕು ಕಂಡಿದ್ದಿಲ್ಲಿ..
ಸತ್ಯವನೆ ನಂಬಿದವನ ಕರ್ಮಭೂಮಿಯಾಗಿತ್ತಿದು
ನನಗೂ ಅದೇ ರೂಢಿ...
ಸುಳ್ಳಿಂದ ಆಗಬೇಕಾದ್ದೇನು??
ಇಲ್ಲಿ ಕ್ಷಣಕ್ಕೊಂದು ಸಾವು, ಸಾವಿಗೊಂದು ಕಾರಣ
ಕ್ಷಣದಲ್ಲೇ ಬಿಡುಗಡೆ ಎಲ್ಲ ಬಂಧಗಳಿಂದ
ಬದುಕಿದ್ದ ಮೂರು ಕ್ಷಣ ಮಾಡಿದ್ದೊಂದೇ ಸತ್ಯ
ತಪ್ಪದ ಸಾವು ಒಬ್ಬರಿಗೊಂದು ತರ
ಅಸ್ತಿತ್ವವ ಕಳೆವುದದು....
ಹೆಸರಿಗಸ್ತಿತ್ವವ ಕೊಡುವುದದು...
ಯಾರನ್ನೂ ಬಿಡದ ಮಾಯೆಯದು
ಇನ್ಯಾರಿಗಿದೆ ಎಲ್ಲರನ್ನೆಳೆದು ತಂದು ತಣ್ಣನೆ ಮಲಗಿಸುವ ಜಾಣ್ಮೆ...
ಜಗದ ಸದ್ದಿಗೆ ಇಲ್ಲಿಲ್ಲ ಬೆಲೆ
ಅಬ್ಬರ ಆರ್ಭಟಗಳೆಲ್ಲ ಗೋರಿ ಮೇಲಿನ ಚಿತ್ರ..
ಆದರೆ ಎಲ್ಲ ಮೀರಿ ಹೊರಟವ ಹೊದ್ದಿಹನು ಭೂತಾಯಿಯ ಸೆರಗ
ಯಾರ ಮುದ್ದಿನ ಕೂಸೋ...ಯಾರ ಹೆತ್ತವರೋ....
ಯಾರ ಬಂಧುಗಳೋ....
ನನಗೆ ಮಾತ್ರ ಜೀವವಿಲ್ಲದ ದೇಹ.....
ಅವರ ಭಾವಗಳು ಅವರಿಗೆ...
ನನಗೋ ಕೊನೆಯಾದ ಬದುಕಿನ ಭಾವ ಹುಡುಕುವ ಹುಚ್ಚು
ಹುಟ್ಟು ಸಾವಿನ ನಡುವೆ ಬದುಕು...
ನನ್ನದು...ಸಾವುಗಳ ನಡುವೆ ಬದುಕು!!!
ದಿನವೂ ಅದೇ ಕೆಲಸ  ಎಂಬ ಬೇಸರ ಕೆಲವೊಮ್ಮೆ...
ಆದರೂ....
ಸತ್ತ ಸಂಬಂಧಗಳ ಜತೆಯ ಬದುಕಿಗಿಂತ....
ನನಗೇನೋ ಗೋರಿಗಳ ಜತೆಗಿನ ಬದುಕೇ ಸುಂದರ.

13 comments:

ಜಲನಯನ said...

ಸೌರಭ ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ ಅನ್ಸುತ್ತೆ... ಸಾವಿನ ಸುತ್ತಲಿನ ಎಳೆಗಳನ್ನು ಎಳೆದೆಳೆದು ಪರಿಚಯಿಸುತ್ತವೆ ನಿಮ್ಮ ಅಷ್ಟೇ ಮಾರ್ಮಿಕ ಸಾಲುಗಳು... ಚನ್ನಾಗಿದೆ..ಕವನ. ಜಲನಯನಕ್ಕೂ ನಿಮಗೆ ಸ್ವಾಗತ.

ದಿನಕರ ಮೊಗೇರ said...

super.... tumbaa prouDa kavana.....

munduvarisi...

Hemanth Kumar said...

ಚೆನ್ನಾಗಿದೆ..
ನನ್ನ ಪ್ರಕಾರ "ಸಾವು" ಮನುಷ್ಯನನ್ನು ಪರಿಪೂರ್ಣನಾಗಿಸುತ್ತದೆ.
ಬದುಕಿನ ಎಲ್ಲಾ ಮಗ್ಗಲುಗಳನ್ನು ಬದಲಿಸಿ ನೆಮ್ಮದಿಯಾಗಿ ಸಾಯುವ ಮನುಷ್ಯ ನಿಜಕ್ಕೂ ಪರಿಪೂರ್ಣ. ಸಾವು ಎಂಬ ಮಾಯೆಯ ಹಿಂದೆ ಎಲ್ಲವು ಶೂನ್ಯ..

Shruthi B S said...

ತು೦ಬಾ ಚನಾಗಿದ್ದು ಸೌರಭ....ಹೇಮ೦ತ್ ಅವ್ರು ಹೇಳಿದ೦ತೆ ಸಾವು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ, ಜೊತೆಗೆ ಸಾವು ಅರ್ಥಪೂರ್ಣವೂ ಆಗಬೇಕು....:)

prashasti said...

ಚೆನ್ನಾಗಿದ್ದು .. ಅರ್ಥಪೂರ್ಣ, ಭಾವಪೂರ್ಣ ಕವಿತೆ :-) ಮತ್ತೊಮ್ಮೆ ಕವನದ ಹಾದಿ ಹಿಡಿದದ್ದಕ್ಕೆ ಅಭಿನಂದನೆ :-)

ಸೌರಭಾ said...

ಧನ್ಯವಾದಗಳು :)

ಸೌರಭಾ said...

ಧನ್ಯವಾದಗಳು ಸರ್ :)

ಸೌರಭಾ said...

ಧನ್ಯವಾದಗಳು:) ಖಂಡಿತಾ ಮುಂದುವರೆಸುತ್ತೇನೆ...:)

ಸೌರಭಾ said...

nice lines!! :)ಧನ್ಯವಾದಗಳು :)

ಸೌರಭಾ said...

ಧನ್ಯವಾದಗಳು :)ಹ್ಮಂ ಸಾವಿನ ಮಾತು ನಂತರ...ಮೊದಲು ಬದುಕು ಅರ್ಥಪೂರ್ಣವಾಗಬೇಕು...ಏನ್ ಹೇಳ್ತೆ?

Unknown said...

dis s wat i was telling...matured one...
ಬದುಕಿನ ಪಯಣ ಎಷ್ಟು ಮುಖ್ಯವೊ ಸಾವಿನ ಸನಿಹವೂ ಅಷ್ಠೇ ಮುಖ್ಯ...

Pradeep Rao said...

ತುಂಬಾ ಚೆನ್ನಾಗಿದೆ ಸೌರಭ.. ತುಂಬಾ ಗಂಭೀರ ವಿಚಾರಗಳು.. Very Philosophical! :)

ಈಶ್ವರ ಪ್ರಸಾದ said...

ಅರ್ಥಪೂರ್ಣ ಕವನ ಚೆನ್ನಾಗಿದೆ ..