Monday, December 24, 2012

ಬಿಟ್ಟು ಬಂದೆ


ಪ್ರತಿ ಹೆಜ್ಜೆಗೂ ಅಸಾಧ್ಯ ನೋವು
ಇನ್ನೊಂದು ಹೆಜ್ಜೆ ಇಡಲಾರೆ ಎಂಬಷ್ಟು
ಆದರೂ ನಡೆಯಲೇಬೇಕಾದ ಕರ್ಮ
ಬದುಕಿನ ಬಂಡಿ ಹಾಗೆಯೇ...

ಹುಡುಕಿದರೆ
ನಿಜ ಸ್ವರೂಪ ಕಾಣದಷ್ಟು ತೇಪೆ
ಅದೇ ಚರಪರ ಸದ್ದು
ಆತ್ಮೀಯವಾಗಿಬಿಟ್ಟಿದೆ....
ನೋವಲ್ಲ...ಶಬ್ದ

ಅವಳ ನೋಡು..
ಅವಳಿಗೆಷ್ಟು ಸುಖ
ದಿನಕ್ಕೊಂದು ಬಣ್ಣ
ನೊವಿನ ನರಳಿಕೆಯೇ ಇಲ್ಲ

ಆದರೂ ನಾ ಅವಳಲ್ಲ...

ಇದ್ದುದರೊಂದಿಗೇ ಒದ್ದಾಡಿದೆ
ಗಾಯ ಮಾಯುವವರೆಗೆ ಕಾದೆ
ಕಲೆ ಉಳಿಯಿತು...ಮತ್ತೆ ಮತ್ತೆ ಗಾಯ...
ತುಟಿ ಕಚ್ಚಿ ಮುನ್ನಡೆದೆ
ಆಗಲೇ ಇಲ್ಲ...

ಕ್ಷಣದಲ್ಲೇ ಆಯಿತು ಜ್ಞಾನೋದಯ
ಬೋಧಿ ವೃಕ್ಷ ಇರಲಿಲ್ಲ
ಬದುಕಿತ್ತು.....
ಸಾಕಲ್ಲ ಅಷ್ಟು..
ಹುಟ್ಟಿಂದ ಏನು ಇದರ ಜೊತೆಯೇ ಇದ್ದೆನೇ?
ಇಲ್ಲವಲ್ಲ...
ಬಿಟ್ಟು ಬಂದೆ....


8 comments:

Sunil said...

superb..

prashasti said...

ಚೆನ್ನಾಗಿದ್ದು ಸೌರಭ.. ಎಲ್ಲಿದ್ದೆ ತಂಗಿ, ಕಾಣ್ತಾನೆ ಇಲ್ಲೆ.. ಬ್ಲಾಗ್ ಲೋಕಕ್ಕೆ ಮತ್ತೆ ಮರಳಿರೋದು ಸಂತಸದ ಸುದ್ದಿ.
ಮುಂಬರೋ ವರ್ಷದಲ್ಲಿ ಇನ್ನಷ್ಟು ಚಂದದ ಕವಿತೆ, ಕತೆಗಳು ನಿನ್ನಿಂದ ಬರ್ಲಿ ಹೇಳೋ ಹಾರೈಕೆ.
ಶುಭವಾಗ್ಲಿ.
ಟೈಮಾದ್ರೆ ನನ್ಬ್ಲಾಗ್ ಕಡೆಗೂ ಬಾ :-)

Shruthi B S said...

ತು೦ಬಾ ಚನಾಗಿದ್ದು ಸೌರಭ....:)

ಈಶ್ವರ said...

ಕವನ ಚೆನ್ನಾಗಿದೆ. ಖುಷಿ ಕೊಟ್ಟಿತು.

Ittigecement said...

nice one.... keep writting.......

ಪದ್ಮಾ ಭಟ್ said...

ಕವನ ಚನ್ನಾಗಿದ್ದು.........

ಶ್ರವಣ ಕುಮಾರ said...

good one... Sourabha :)

ಹೃದಯವಂತ ಗಂಗಾಧರ್ ನಾಗರಾಜ್ said...

Super