Saturday, July 31, 2010

ಬಂದೆನೇ ಸುಮ್ಮನೆ....

ಪುಟ್ಟ ಹೆಣ್ಣು ಮಗುವಿನ ನೋವು......



ನವಮಾಸಗಳ ಕೊನೆಯವರೆಗೂ
ಅಮ್ಮನೊಡಲೇ ಎನ್ನ ಅಂಗಳ
ಅ ವಾತ್ಸಲ್ಯಮಯ ಪ್ರತಿ ಉಸಿರಲಿ
ಕಂಡೆ ನಾ ಪ್ರೀತಿಯ ಬೆಳದಿಂಗಳ

ಅವಳ ನಡಿಗೆಯೇ ಎನಗೆ ಉಯ್ಯಾಲೆ ಆಟ
ಅವಳು ತಿಂದಾ ತುತ್ತೇ ಅಮೃತದ ಊಟ
ಲಯಬದ್ಧ ಎದೆಬಡಿತವೆ ನಿತ್ಯ ಲಾಲಿ
ಹೀಗೆ ಸುಖದಲಿ ಇದ್ದೆ ಎಲ್ಲ ಎಲ್ಲೆಯ ಮೀರಿ

ಅಮ್ಮನ ಆ ಆಕ್ರಂದನ ನನ್ನ ಎಚ್ಚರಿಸಿತ್ತು
ನಾ ಏ ಭುವಿಗೆ ಬರುವ ಸಮಯ ಬಂದಿತ್ತು
ಆ ದೈವಕೆ ನೋವಿತ್ತ ಬೇಸರದಿ ನಾ ಅತ್ತೆ
ಸುಖವ ಕಳೆದುಕೊಂಡು ನಿಜದಿ ನಾ ಬೇಸತ್ತೆ

ಎಲ್ಲರ ಮಡಿಲೊಳಗೆ ಮುದ್ದು ಕೂಸಾಗಬಯಸಿದ್ದೆ
‘ಅಯ್ಯೋ ಹೆಣ್ಣೇ ‘ಎಂಬ ಉದ್ಗಾರದಿ ನಾ ಪಾತಾಳಕ್ಕಿಳಿದಿದ್ದೆ
ನಾ ಹೆಣ್ಣಾದುದರಲಿ ಯಾರ ತಪ್ಪಿಹುದು?
ನನದೆ?ನನ್ನವ್ವನದೇ?ಸೂತ್ರಧಾರ ಆ ಭಗವಂತನದೇ?

ನನ್ನ ದೈವದಾ ನೋವ ನಾ ನೋಡಲಾರೆ
ಎಲ್ಲರಾ ತಿರಸ್ಕಾರ ನಾ ಸಹಿಸಲಾರೆ
ನೀ ನೀಡಿದ ಜನ್ಮ ನಿನಗೇ ಇರಲಿ ದೇವಾ
ಹೆಣ್ಣಾಗಿ ಹುಟ್ಟಿದ್ದಕ್ಕೆ ನಾ ತೊರೆಯುವೆ ಈ ಜೀವ

ಕಣ್ಣೊಳಗಿನ ತಾಯಿಯ ಆ ರೂಪ ಕರಗುತ್ತಿದೆ
ಒಡಲಾಳದ ನೋವಿಗೆ ಜೀವಜಲ ಇಂಗುತಿದೆ
ಮತ್ತೆ ಕತ್ತಲಿನೆಡೆಗೆ ಹೊರಡುವಾ ಮನಸಾಗಿದೆ
ನಾ ಹೋಗುವೆ ತಿರುಗಿ ಬಾರದೆಡೆಗೆ

ತಪ್ಪಿಲ್ಲದಾ ಜೀವ ನಿರ್ಜೀವವಾಯಿತು
ಸದ್ದಿಲ್ಲದ ಮನೆಬೆಳಕು ಆರಿಹೋಯಿತು

3 comments:

Pradeep Rao said...

ಅತ್ಯುತ್ತಮವಾಗಿದೆ! ಸ್ತ್ರೀ ಬ್ರೂಣ ಹತ್ಯೆಯ ಘೋರತೆಯನ್ನು ಮುಗ್ಧ ಮಗುವಿನ ದೃಷ್ಟಿಯಲಿ ಅದ್ಭುತವಾಗಿ ಚಿತ್ರಿಸಿದ್ದೀರಿ.

ಎಲ್ಲರ ಮಡಿಲೊಳಗೆ ಮುದ್ದು ಕೂಸಾಗಬಯಸಿದ್ದೆ
‘ಅಯ್ಯೋ ಹೆಣ್ಣೇ ‘ಎಂಬ ಉದ್ಗಾರದಿ ನಾ ಪಾತಾಳಕ್ಕಿಳಿದಿದ್ದೆ
- ಈ ಸಾಲುಗಳು ತುಂಬ ಹಿಡಿಸಿದವು. ಮನಕ್ಕೆ ತಟ್ಟುವಂತಿದೆ.

Sandeepa G said...

faaaaaabulous.....

It Starts said...

Superb,,,,,,,,.! mothers love,care nd affection cannot be replaced with anything in this world....I pray to god that ur mother live a 100 years ahead to be loved by you and to love you.....chweeeeeeeettt poem kane so nice......